ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಂಬಪ್ಪ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಪ್ರೀತಿ ಎಂಬ ಸಾಗರದಲ್ಲಿ ಬಿದ್ದ ಪ್ರೇಮಿಯೂ ನಾನಲ್ಲ ಹಾಗಂತ ಪ್ರೀತಿ ಮಾಡುವುದು ತಪ್ಪು ಅಂತ ಹೇಳುವ ಹಕ್ಕು ನನಗಿಲ್ಲ, ಒಮ್ಮೆ ಅಚಾನಕವಾಗಿ ಅಕ್ಷರ ಮಾಂತ್ರಿಕನ “ಹೇಳಿ ಹೋಗು ಕಾರಣ” ಎಂಬ ಹೊತ್ತಿಗೆಯನ್ನು ನನ್ನ ಹತ್ತಿರದಲ್ಲಿಟ್ಟುಕೊಂಡು ಕುಳಿತಿದ್ದೆ ಪುಟಗಳ ಸಂಖ್ಯೆ ನೋಡಿ ಗಾಬರಿಗೊಂಡಿದ್ದೆ ಹೆಂಗೋ ಹೊತ್ತಿಗೆಯನ್ನು ಓದಲು ಪ್ರಾರಂಭ ಮಾಡಿದೆ ಆಗ ನನಗೆ ಕಂಡಿದ್ದು ಊಹಿಸಲಾಗದಂತಹ ಬೇರೆ ಲೋಕ...... ಶಿವಮೊಗ್ಗದ ಶಿವಮೂರ್ತಿ ಸರ್ಕಲ್ ನಲ್ಲಿ ಶುರುವಾಗಿ ಹೈದ್ರಾಬಾದ್ ನಲ್ಲೆಲ್ಲ ಅಲೆದಾಡಿ ಮತ್ತದೇ ಶಿವಮೂರ್ತಿ ಸರ್ಕಲ್ ನಲ್ಲೆ ಮುಕ್ತಾಯಗೊಂಡು ಆರಂಭವಾಗುವ ಕಥೆ.................. ಪ್ರೀತಿ ಎಂಬುವುದು ಮನುಷ್ಯನನ್ನಾಗಿಯೂ, ದೇವರಾಗಿಯೂ ಹಾಗೂ ರಾಕ್ಷಸನನ್ನಾಗಿಸಬಹುದು ಎಂಬುದಕ್ಕೆ ರವಿ ಬೆಳಗೆರೆ ಅವರು ಬರೆದಿರುವ ಈ " ಹೇಳಿ ಹೋಗು ಕಾರಣ" ಎಂಬ ಕಾದಂಬರಿಯೇ ಸಾಕ್ಷಿ. ✨ ದೇವರಿಗಿಂತ ಮಿಗಿಲಾಗಿದ್ದು ಹಿಮವಂತನ ಪ್ರೀತಿ ಬೆಟ್ಟದಷ್ಟು ಕಟ್ಟಿಕೊಂಡ ಆಸೆ ಆಕಾಂಕ್ಷೆಗಳು ಪ್ರಾರ್ಥನಾ ಎಂಬುವಳ ಮೋಸ, ವಂಚನೆ ಊರ್ಮಿಳಾ ಎಂಬ ನೇರ ನುಡಿಯ ವ್ಯಕ್ತಿತ್ವ ದೇಭು ಎಂಬ ಅಗರ್ಭ ಶ್ರೀಮಂತ ಹುಡುಗನ ಚೆಲ್ಲಾಟ ಈ ಎಲ್ಲರ ಎಲ್ಲಾ ಗುಣಗಳು ಒಂದೇ ಪರಿಸ್ಥಿತಿಯಲ್ಲಿ..............
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಬೆನ್ನುಡಿ ಓದಿದರೆ ಇದು ಪ್ರೀತಿಸಿ ಮೋಸ ಮಾಡುವ ಹುಡುಗಿಯ ಕಥೆ ಇರಬಹುದು ಎಂದೆನಿಸುತ್ತದೆ. ಆದರೆ ಒಮ್ಮೆ ಅಕಸ್ಮಾತ್ತಾಗಿ ಈ ಪುಸ್ತಕ ಹಿಡಿದೆ. ಕಂಡಿದ್ದು ಬೇರೆಯದೇ ಪ್ರಪಂಚ!!!. ಹಿಮವಂತನ ಪ್ರಾಮಾಣಿಕ ಪ್ರೀತಿ ಮಣ್ಣಾಗಿದ್ದು ಊರ್ಮಿಳಾ ಎಂಬ ಹುಡುಗಿಯ ನೇರ ದಿಟ್ಟ ವ್ಯಕ್ತಿತ್ವ ದೇವರಿಗೆ ಮೋಸ ಮಾಡಬಹುದಾ ಎಂದು ಹೇಳಿದ ಪ್ರಾರ್ಥನಾ ದೇವರನ್ನೇ ಕೊಂದ ಕ್ಷಣ, ಹುಡುಗಿಯರ ಬಾಳಲ್ಲಿ ದೇಬು ಎಂಬ ಅಗರ್ಭ ಶ್ರೀಮಂತನ ಚೆಲ್ಲಾಟ.. ಪ್ರತಿಯೊಂದು ಅಂಶವು ಈ ಪುಸ್ತಕದಲ್ಲಿ ಹಾಗೂ ಓದಿದ ನನ್ನ ಮನಸಲ್ಲಿ ಅಚ್ಚಳಿಯದಂತೆ ಇವೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಪ್ರೀತಿ ಮಾಡುವ ಪ್ರತಿಯೊಬ್ಬ ಹುಡುಗ ಹುಡುಗಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.