Submission 1722

ಪುಸ್ತಕದ ಶೀರ್ಷಿಕೆ: ಬದುಕಲು ಕಲಿಯಿರಿ

ಪುಸ್ತಕದ ಲೇಖಕರು: ಸ್ವಾಮಿ ಜಗದಾತ್ಮಾನಂದ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಹರ್ಷಿತ ಚಂದ್ರಶೇಖರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಬದುಕು ಅಂದ್ರೇನೆ ಹಾಗೇ ಯಾರಿಗಿಲ್ಲ ಕಷ್ಟ, ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ಯಾರಿಗಿಲ್ಲ ಚಿಂತೆ, ಕರ್ಮ ಫಲಗಳನ್ನ ಹೊತ್ತು ಬಂದ ಪ್ರತೀ ಜೀವಿಗೂ ಬದುಕು ಒಂದಲ್ಲ ಒಂದು ರೀತಿ ಪಾಠವನ್ನ ಕಲಿಸುತ್ತದೆ ಯಾರಿಗೂ ತೊಂದರೆ ಕೊಡದೆ, ತನನ್ನು ತಾನು ತೊಂದರೆಗೆ ಸಿಕ್ಕಿಕೊಳ್ಳದೇ, ಬೇರೆಯವರ ಬಾಳಿಗೆ ನೆರವಾಗುತ್ತಾ, ಅನೇಕ ಪರಿಸ್ಥಿತಿಗಳ ಬಗೆ ಬಗೆಯ ಬಾಂಧವ್ಯಗಳ ಜಾಲದಲ್ಲಿ ತನ್ನನು ತಾನು ಹೆಣೆದುಕೊಳ್ಳುವುದು ಅನಿವಾರ್ಯ ವಾಗುತ್ತದೆ. ನಮ್ಮ ಮನಸಿನ ಪದರಗಳನ್ನು ನಾವೇ ಬಿಡಿಸಿ ನೋಡಿಕೊಳ್ಳದಿದರೆ ಈ ಲೌಕಿಕ ಜಗತ್ತಿನಲ್ಲಾಗಲಿ ಅಥವಾ ಆಧ್ಯಾತ್ಮಿಕ ಜಗತ್ತಿನಲ್ಲಾಗಲಿ ಏನನ್ನೂ ಸಾಧಿಸಲು ಆಗುವುದಿಲ್ಲ ಎಂಬುದು ಈ ವೊಂದು ಕೃತಿಯ ಉದ್ದೇಶ ಅದು ಬೇರೆ ಬೇರೆ ಸಂಧರ್ಭ ರೀತಿ ಅನುಸಾರ ಸ್ವಾಮಿ ಜಗದಾತ್ಮಾನಂದ ಸ್ವಾಮಿಗಳು ವಿಧ ವಿಧವಾಗಿತಿಳಿಸಿದಾರೆ. ಬದುಕು ಎಂಬುವ ಕಲೆ ಅತ್ಯಂತ ಕಷ್ಟಕರವಾದ ಸತ್ಯ, ಮನುಷ್ಯ ಜೀವಿಯು ಹುಟ್ಟಿದಾಗಿನಿಂದ ಹಲವಾರು ಬಾಂಧವ್ಯಗಳ ಸುಳಿಯೊಳಗೆ ಬದುಕಬೇಕಾಗುತ್ತದೆ ಈಗೆ ಅನೇಕ ಜನರ ಪರಿಸ್ಥಿತಿಗಳ ಜಾಲದಲ್ಲಿ ತನ್ನನು ತಾನು ಹೆಣೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಈ ಎಲ್ಲದರ ನಡುವೆ ತಾನು ತೊಂದರೆಗೆ ಸಿಕ್ಕಿಕೊಳ್ಳದೇ, ತನ್ನ ಸುತ್ತ ಮುತ್ತ ಇರುವ ಇತರರಿಗೂ ತೊಂದರೆ ಕೊಡದೆ ಸಾಧ್ಯವಾದರೆ ಅವರಿಗೆ ನೆರವು ನೀಡುತ ಬಾಳುವುದು ಬದುಕಿನ ಸಾರ್ಥಕತೆ ತೋರುತ್ತದೆ. ಈ ಪುಸ್ತಕದಲ್ಲಿ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾವನೆ ಮಾಡಿದರೆ ಮನುಷ್ಯನ ಬದುಕಿನಲ್ಲಿ ಬರುವ ಅದೆಷ್ಟೋ ಸುಖ ದುಃಖದ ಸಂಗತಿಗಳನ್ನು ವಿವರಿಸಿದರೆ ಒಂದು ವಿಷಯದ ಬಗ್ಗೆ ಹೇಳುವುದಾದರೆ ಮನುಷ್ಯನಲ್ಲಿ ಕಾಡುವ ಒಂದು ಸಾಮಾನ್ಯ ವಿಷಯ ಎಂದರೆ ಅದು ಚಿಂತೆ ಆ ಚಿಂತೆ ಯಾವ ಯಾವ ಬಗ್ಗೆಯಲಿ ಯಾವ ಯಾವ ರೀತಿಯಲಿ ಮನುಷ್ಯನ ಮಾನಸಿಕ ಮನಸ್ಥಿಯನ್ನು ತಿನ್ನುತ್ತದೆ ಹಾಗೂ ಅದರಿಂದ ಹೊರ ಬರುವ ಅದೆಷ್ಟೋ ದಾರಿಗಳು ಇವೆ ಎಂದು ಈ ಪುಸ್ತಕದ ಮುಖಾಂತರ ತಿಳಿಸಿದ್ದಾರೆ ಪ್ರತಿಯೊಬ್ಬರ ಬದುಕು ಅವರವರ ಹತೋಟಿಯಲ್ಲಿ ಇದ್ದರೆ ಸ್ವಲ್ಪವಾದರು ನೋವಿನೆಡೆಗೆ ಸಾಗುವ ದಾರಿ ತಪ್ಪುತ್ತದೆ. ಇಷ್ಟೇ ಅಲ್ಲದೆ ಪ್ರೀತಿ ಎಂದರೆ ಬರಿ ಒಂದು ಗಂಡು ಹೆಣ್ಣಿನ ನಡುವೆ ಹುಟ್ಟುವ ಪ್ರೀತಿಯಲ್ಲ ಪ್ರತೀ ಸಂಬಂಧದ ಬಗ್ಗೆ ಬಗ್ಗೆಯ ಪ್ರೀತಿಯನ್ನು ಇದರಲ್ಲಿ ವಿಭಿನ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಮತ್ತು ಅದರಿಂದಾಗುವ ಏರು ಪೇರುಗಳ ಬಗ್ಗೆಯೂ ವರ್ಣಿಸಿದ್ದಾರೆ. ಇನ್ನು ನನಗೆ ಇಷ್ಟ ಮತ್ತು ತುಂಬ ಕುತೂಹಲವೆನಿಸುವ ಪುಟ್ಟ ಎಂದರೆ ಸಾವಿನ ನಂತರ ಏನು ಎಂಬ ಕುತೂಹಲಕ್ಕೆ ಈ ಪುಸ್ತಕದಲ್ಲಿ ಬಹಳ ಅದ್ಭುತವಾಗಿ ವಿವರಿಸಿದಾರೆ. ಬದುಕು ಕಲಿಸಿಕೊಡುವ ಪ್ರತಿಯೊಂದು ಪಾಠದ ಮೌಲ್ಯವನ್ನ ಈ ಒಂದು ಪುಸ್ತಕದಲ್ಲಿ ತಿಳಿಯಬಹುದು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಪುಸ್ತಕದಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ವರ್ಣನೆ ಮಾಡಿರುವುದಿಲ್ಲ ಇದು ಕೇವಲ ನಮ್ಮ ಬದುಕಿಗೆ ಸಂಬಂಧಪಡುವ ಮತ್ತು ಬದುಕಿನ ಮೌಲ್ಯದ ಬಗ್ಗೆ ವರ್ಣಿಸಿರುವ, ಯಾವ ಸಂಧರ್ಭದಲ್ಲಿ ಹೇಗೆ ಎಧೆಗುಂದಧೆ ಮುನ್ನುಗಬೇಕು ನಮ್ಮೆಲ್ಲ ಚಿಂತೆಗಳನ್ನ ಬಿಟ್ಟು ಎಂಬುದು ಇಲ್ಲಿ ಹೇಳಿದೆ, ಒಂದೊಳ್ಳೆ ಪುಸ್ತಕ ಮಾರ್ಗದರ್ಶನ ನೀಡುತ್ತದೆ ಅದುವೇ ಬದುಕಲು ಕಲಿಯಿರಿ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ತಮ್ಮ ಬದುಕಿನ ಮೇಲೆ ಆಸಕ್ತರಿರುವ ಎಲ್ಲರಿಗೂ ಈ ಪುಸ್ತಕ ಸಮರ್ಪಣೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

6
Votes
94
Views
7 Months
Since posted

Voting Closed!

Scroll to Top