ಪುಸ್ತಕದ ಶೀರ್ಷಿಕೆ: ಮಾಂಡೋವಿ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕೃಷ್ಣ ಬಾಲಕ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಯೌವ್ವನದ ಚಂಚಲತೆಯಿಂದ ಶುರುವಾಗುವ ಈ ಕಾದಂಬರಿ , ಪ್ರೀತಿಯ ಹಲವಾರು ಮುಖಗಳನ್ನು ಎಳೆ-ಎಳೆಯಾಗಿ ತೋರಿಸುತ್ತಾ ಹೋಗುತ್ತದೆ. ಪ್ರೇಮ ನಿವೇದನೆ , ವಿರಹ , ಒಂಟಿತನ, ಅವಮಾನ, ದ್ವೇಷ , ಪ್ರೀತಿ ಪಡೆಯುವ ಹಂಬಲ , ಮಧ್ಯದಲ್ಲಿ ಬೇರೆ ದಾರಿ ಹಿಡಿಯುವ ಸಂಗತಿಗಳು ಕಾಣಸಿಗುತ್ತವೆ. "ಮನುಷ್ಯನಿಗೆ ಪ್ರೇಮವೊಂದೇ ನೋಡು ವಜ್ರದಂಥ ವಿಷ ಕುಡಿಸೋದು" ಎನ್ನುವ ಸಾಲು ಅದ್ಭುತ. ಚಲಪತಿಯ ಅಸಾಧಾರಣ ಪ್ರೀತಿ , ಮಂಡೋವಿಯ ನಿರ್ಲಕ್ಷ್ಯ , ಸೀತಮ್ಮನ ಮಗನ ಬಗೆಗಿನ ಕಾಳಜಿ, ಕಾಂಚನ ಮಾಲಾಳ ತಾಯಿ ಪ್ರೀತಿ ಎಲ್ಲವೂ ವಿಶಿಷ್ಟವಾದ ರೀತಿಯಲ್ಲಿ ಸಾಲುಗಳ ರೂಪಕ್ಕೆ ತಂದ ಅಕ್ಷರ ಮಾಂತ್ರಿಕನಿಗೊಂದು ನನ್ನ ಸಲಾಂ. ಪ್ರೀತಿ ನಿಂತ ನೀರಲ್ಲ ಹರಿಯುವ ನದಿ ಇದ್ದ ಹಾಗೆಯೇ ಎನ್ನುವುದು ಸರಿ , ಇಲ್ಲಿ ಮೊದಲ ಪ್ರೀತಿ ಅಷ್ಟು ಗಾಢವಾಗಿದ್ದರು ಮಾಂಡೋವಿ ಚಲಪತಿಯ ರೂಪ ನೋಡಿ ತನ್ನ ಪ್ರೇಮವನ್ನು ಸಾಯಿಸುವ ಬಗೆ , ಅನಂತರ ಡಾ:ಗೌಡನೊಂದಿಗೆ ವಿವಾಹ , ಬದುಕು , ನೋವು- ನಲಿವು ಒಂದು ಕಡೆಯಾದರೆ , ಚಲಪತಿಯ ನೊಂದ ಮನಸು , ಮಂಡೋವಿಯನ್ನು ಹೇಗಾದರೂ ಪಡೆಯಬೇಕೆಂಬ ಹಠ , ಸಿಟಿ ಕ್ಲಬ್ಬಿನ ಪ್ರೇಮ ಪತ್ರಗಳು, ಸತ್ತೆಪ್ಪನ ಬಸ್ ಕಂಪೆನಿ ಇನ್ನೊಂದು ಕಡೆ. ಡಾ: ಗೌಡ ಸತ್ತಮೇಲೆ ಮತ್ತೆ ಚಿಗುರುಯೊಡೆಯುವ ಇವರಿಬ್ಬರ ಪ್ರೀತಿ , ಪ್ರಯಾಣ ಮತ್ತೊಂದು ಅಧ್ಯಾಯ. ಕಡೆಗೆ ಒಂದಾಗಿ ಇವರಿಬ್ಬರ ಮುದಿವಯಸ್ಸಿನ ಮಿಲನ ಪ್ರಯಾಣಕ್ಕೆ ಅಡ್ಡಿಯಾದರು ಹೇಗೋ ಕೆಲವು ಮಾತ್ರೆಗಳಿಂದ ತಮ್ಮ ಆಸೆಗಳನ್ನು ತೀರಿಸಿಕೊಳ್ಳುತ್ತಾರೆ. ಇವರಿಬ್ಬರ ಮೊದಲ ಪ್ರೀತಿ ಕೊನೆಗೂ ಅದೆಷ್ಟೋ ಅಡ್ಡಿ ಆತಂಕಗಳನ್ನು ದಾಟಿ ಯಶಸ್ವಿಯಾಗಿ ಸಾಗಿಬಿಡುತ್ತದೆ. ನಮ್ಮ ಪಾಲಿಗೆ ಏನು ಯಾವಾಗ ಸಿಗಬೇಕೋ ಅದು ಆಗಲೇ ನಮಗೆ ದಕ್ಕುವುದು ಅಲ್ಲಿಯವರೆಗೆ ಚಲಪತಿಯ ತಾಳ್ಮೆ ನಮ್ಮಲ್ಲಿ ಇರಬೇಕು ಅಷ್ಟೇ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಸೋಮಯಾಜುಲ ವೆಂಕಟಚಲಪತಿ , ಮಾಂಡೋವಿ , ಕಾಂಚನ ಮಾಲಾ, ಮಂಗಳ ಗೌರಿ , ಶಿವರಾಜಪ್ಪ , ಸೀತಮ್ಮ, ಡಾ ಗೌಡ ಇವು ಈ ಕಾದಂಬರಿಯಲ್ಲಿ ಕಾಡುವ ಪಾತ್ರಗಳು... ಮುಕ್ತಾಯಿ, ಜೇಕಬ್ ಚಂದ್ರಪ್ಪ , ಜಾಹ್ನವಿ , ಜುಲೆಕಾಬಿ , ಸತೆಪ್ಪ ಪಾತ್ರಗಳು ಕಾಣಸಿಗುತ್ತವಾದರು ಓದುಗನಿಗೆ ಅಷ್ಟೊಂದು ರುಚಿ ನೀಡುವ ಪಾತ್ರಗಳು ಏನು ಅಲ್ಲಾ. "ಮನುಷ್ಯನಿಗೆ ಪ್ರೇಮವೊಂದೇ ನೋಡು ವಜ್ರದಂಥ ವಿಷ ಕುಡಿಸೋದು" ಈ ಸಾಲು ಈ ಕಾದಂಬರಿ ಓದಿದ ಮೇಲೆ ಮನಸಿನಲ್ಲಿ ಉಳಿದುಹೋಗುತ್ತದೆ. ಕಾದಂಬರಿಯ ಕೊನೆಯಲ್ಲಿ ಮಾಂಡೋವಿ ಮತ್ತು ಚಲಪತಿಯ ಮಿಲನವಾದ ಮೇಲೆ ನಡೆಯುವ ಸಂಭಾಷಣೆ. ನನ್ನನ್ನು ನೀನು ನಿಜಕ್ಕೂ ಪ್ರೀತಿಸುತ್ತಿಯ ಚಲಂ? ನನ್ನನ್ನು ನಾನು ಪ್ರೀತಿಸುವದಕ್ಕಿಂಥ ಹೆಚ್ಚಾಗಿ! ಎನ್ನುವ ಚಲಪತಿಯ ಉತ್ತರ ಗಾಢ ಪ್ರೇಮವನ್ನು ತೋರಿಸುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಕಾದಂಬರಿಯು ಯುವಜನತೆಗೆ , ಮೊದಲ ಪ್ರೇಮದಲ್ಲೇ ಉಳಿದುಹೋದವರಿಗೆ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.