ಪುಸ್ತಕದ ಶೀರ್ಷಿಕೆ: ಮೂಕಜ್ಜಿಯ ಕನಸುಗಳು
ಪುಸ್ತಕದ ಲೇಖಕರು: ಶಿವರಾಮ ಕಾರಂತ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಮರೇಶ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಅಶ್ವತ್ಥ ಕಟ್ಟೆಯ ಮೇಲೆ ಕುಂತು, ಜನರು ಬಾಯಿ ತೆರೆದ ಕಾರಣಕ್ಕೆ ಮೂಕಿಯಾದ, ಅಧಿಕ ಪ್ರಸಂಗಿಗಳ ಬಾಯಿ ಮುಚ್ಚಲು ಮಾತನಾಡಿದ, ಸಮಾಜಕ್ಕೆ ಸೆಡ್ಡು ಹೊಡೆದು ತನ್ನ ಸುಖದ ಬಯಕೆಗಳನ್ನ ಈಡೇರಿಸಿಕೊಂಡು ಕೊನೆಗೆ ಯಾರ ಹಂಗೂ ಇಲ್ಲದೆ ಸ್ವಾವಲಂಬಿ ಬದುಕು ನಡೆಸಿದ ನಾಗಿಯ ಕತೆಯನ್ನ ಹೇಳಿದ, ಪತಿವ್ರತೆ ಅಂತ ಸಾಬೀತಾದರು ರಾಮ ಸೀತೆಯನ್ನ ಕಾಡಿಗೆ ಯಾಕ್ ಬಿಟ್ಟ, ಕುರುಕ್ಷೇತ್ರ ಯುದ್ಧದಲ್ಲಿ 18 ದಿನಗಳ ಕಾಲ ಭಗವದ್ಗೀತೆ ಭೋದಿಸುವಾಗ ಕೌರವರು ಏನ್ ಮಾಡ್ತಿದ್ರು, ಜಾತಕ ಹೊಂದಾಣಿಕೆಯಾದರೂ ಮದುವೆಗಳು ಯಾಕೆ ಮುರಿದು ಬೀಳ್ತವೆ ಅಂತ ಪ್ರಶ್ನಿಸ್ತ, ರಾಮಾಯಣ ಮಹಾಭಾರತ ಆಚರಣೆಗಳು ಸಂಪ್ರದಾಯಗಳು ಯಾರೋ ಹೇಳಿದ್ರು ಅನ್ನೋ ಕಾರಣಕ್ಕೆ ನಂಬದೆ ನಿನ್ನ ಮಸ್ತಕಕ್ಕೆ ಹಾಕಿ ಉಜ್ಜಿ ನೋಡು ನೀನು ನಂಬಿರುವ ಪ್ರತಿ ನಂಬಿಕೆಗೂ ನಾನು ಯಾಕೆ ನಂಬಿದ್ದೇನೆ ಅನ್ನೋ ಖಚಿತತೆ ನಿನಗೆ ಇಲ್ಲದಿದ್ರೆ ಆ ನಂಬಿಕೆಗೆ ಅರ್ಥವೇ ಇರೋದಿಲ್ಲ ಅಂತ ಚಾಟಿ ಏಟು ಬೀಸುತ್ತ ಆಲೋಚಿಸುವಂತೆ ಮಾಡುವ ಮಹಾ ಕೃತಿ, ಮತಿ, ಸಾಹಿತಿ ಮೂಕಜ್ಜಿಯ ಕನಸುಗಳು. ಮೂಕಜ್ಜಿಗೆ ಕೆಲವು ಅಲೌಕಿಕ ಶಕ್ತಿಗಳಿರುತ್ತವೆ, ಅಂದರೆ ಕೆಲವು ವಸ್ತುಗಳನ್ನು ಅಥವಾ ಜನರನ್ನು ನೋಡಿದಾಗ ಅವರಿಗೆ ಸಂಬಂಧಿಸಿದ ಹಿಂದಿನ ಘಟನೆಗಳು ಅಥವಾ ಇತಿಹಾಸವು ಕನಸುಗಳ ರೂಪದಲ್ಲಿ ಕಾಣಿಸುತ್ತವೆ. ಈ ಕನಸುಗಳ ಮೂಲಕ, ಮಾನವನ ನಾಗರಿಕತೆಯ ವಿಕಾಸ, ನಂಬಿಕೆಗಳು, ಸಂಪ್ರದಾಯಗಳು, ಮತ್ತು ಸಾಮಾಜಿಕ ಕಟ್ಟುಪಾಡುಗಳ ಬಗ್ಗೆ ವೈಚಾರಿಕವಾಗಿ ಪ್ರಶ್ನಿಸಲಾಗುತ್ತದೆ. ಇದು ಕೇವಲ ಕಥೆಯಲ್ಲ, ಬದಲಿಗೆ ಜೀವನದ ಹಲವು ಮಜಲುಗಳ ಬಗ್ಗೆ, ಸಾವಿರಾರು ವರ್ಷಗಳ ನಂಬಿಕೆಗಳ ಬಗ್ಗೆ ಪ್ರಶ್ನಿಸುವ ಒಂದು ಬೌದ್ಧಿಕ ಮತ್ತು ತಾತ್ವಿಕ ಕಾದಂಬರಿಯಾಗಿದೆ. ಕನಸುಗಳು ಅಂದ್ರೆ ಅವು ರಾತ್ರಿ ಕನಸುಗಳಲ್ಲ ; ತರ ತರದ ಮನಸುಗಳು(ವಿಚಾರಗಳು). ಇಂತಹ ಮಹಾನ್ ಪುಸ್ತಕ ಬರೆದ ಮಸ್ತಕಕ್ಕೆ (ತಲೆಗೆ), ಕಲೆಗೆ, ಆ ಕಲಿಗೆ, ಆ ಕವಿಗೆ 🙏.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಒಂದು ಪ್ರಸಂಗದಲ್ಲಿ ಮೂಕಜ್ಜಿ ದೇವರ ಹತ್ರ ಬೇಡಿಕೊಳ್ಳುವ ಬಗ್ಗೆ ಒಂದು ಮಾತು ಹೇಳ್ತಾರೆ: ಕಣ್ಣು, ಮೂಗು, ಕಿವಿ, ಬಾಯಿ, ಕೈ ಕಾಲುಗಳು ಎಲ್ಲವನ್ನೂ ಕೊಟ್ಟು ಜೀವವನ್ನ ನೀಡಿದ ದೇವರ ಬಳಿ ಇನ್ನೇನು ಕೇಳೋದು ಅಂತ ಅಂದ್ರೆ ಅವರ ಪ್ರಸಿದ್ಧ ವಾಕ್ಯವಾದ : ಕೇಳುವುದಕ್ಕೆ ಇನ್ನೇನಿದೆ ಬದುಕೇ ಒಂದು ಉಡುಗೊರೆ ಅಲ್ಲವೇ ಎಂಬರ್ಥದ್ದು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಯಾವ ಮಿತಿಗಳೂ ಇಲ್ಲದೆ ಎಲ್ಲರಿಗೂ ಇದನ್ನ ಸೂಚಿಸುತ್ತೇನೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.