Submission 1790

ಪುಸ್ತಕದ ಶೀರ್ಷಿಕೆ: ಮೂಕಜ್ಜಿಯ ಕನಸ್ಸುಗಳು

ಪುಸ್ತಕದ ಲೇಖಕರು: ಡಾ ಶಿವರಾಮ ಕಾರಂತ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ನಿಸರ್ಗ ಜಿ ಪಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಮೂಕಜ್ಜಿಯ ಕನಸುಗಳು' ಕಾದಂಬರಿಯು 'ಮೂಡೂರು' ಎಂಬ ಹಳ್ಳಿಯಲ್ಲಿ ನಡೆಯುತ್ತದೆ.ಕಾದಂಬರಿಯು ದೇವರ ಅಸ್ತಿತ್ವ, ಸಂಪ್ರದಾಯಗಳು ಮತ್ತು ಮಾನವ ಜೀವನದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆಕಾರoತರ ಈ ಕಾದoಬರಿಯು ಕರ್ನಾಟಕದ ಕರಾವಳಿಯ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಕಾದಂಬರಿಯು ಪ್ರಾಚೀನಕಾಲದಿಂದ ನಂಬಿಕೊಂಡು ಬಂದಿರುವ ಸಂಪ್ರದಾಯಗಳನ್ನು, ಹಳ್ಳಿ ಜೀವನದ ಮಗ್ಗಲುಗಳನ್ನು, ಕೌಟುಂಬಿಕ ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡುತ್ತದೆ. ಕಥೆಯು ಹೆಚ್ಚ್ರಾಗಿ ಕರಾವಳಿಯ ಕನ್ನಡವನ್ನು ಬಳಸುತ್ತದೆ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಕ್ಷಣಗಳು ಸುಬ್ಬರಾಯನ ಅಜ್ಜಿ, ಅವಳ ಹೆಸರು ದೇವಿ ಮೂಕಾಂಬಿಕೆ ಮೇಲೆ ಇಡಲಾಗಿದೆ, ಅವಳೊಬ್ಬ ಅನಕ್ಷರಸ್ಥೆ, ವಿಧವೆ. ಕಥೆಯಲ್ಲಿ ಮೂಕಜ್ಜಿಗೆ ವಿಶೇಷವಾದ ಗ್ರಹಣಶಕ್ತಿ ಇದೆ. ಅವಳಿಗೆ ಹಿಂದೆ ನಡೆದುಹೋದ ಘಟನೆಗಳ ಮತ್ತು ಈಗ ಅಗುತ್ತಿರುವ ಘಟನೆಗಳ ಅರಿವಿದೆ. ಸುಬ್ಬರಾಯನು ತನ್ನ ಅಜ್ಜಿಯ ಜೊತೆ ನಡೆಸುವ ಚರ್ಚೆಗಳು ಕಾದಂಬರಿಯ ಜೀವಾಳವಾಗಿದೆ . ಪಾತ್ರಗಳು. ಸುಬ್ಬರಾಯ- ಕಥೆಯ ನಾಯಕ,ನಿರೂಪಕ. ಸುಬ್ಬರಾಯನು ಓದಿದ ಹುಡುಗ, ಅವನಿಗೆ ಹಳ್ಳಿಯ ಧಾರ್ಮಿಕ ಆಚರಣೆಗಳ, ಅವುಗಳ ಇತಿಹಾಸ ತಿಳಿಯುವ ಹಂಬಲ. ಮೂಕಜ್ಜಿ- ಸುಬ್ಬರಾಯನ ಅಜ್ಜಿ, ಅವಳ ಪೂರ್ಣ ಹೆಸರು ಮೂಕಾಂಬಿಕೆ. ಕಾದಂಬರಿಯಲ್ಲಿ ಇವಳಿಗೆ ವಿಶೇಷವಾದ ಗ್ರಹಣಶಕ್ತಿ ಇದೆ. ಅವಳು ಹಿಂದೆ ನಡೆದುಹೋದ ಘಟನೆಗಳ ಮತ್ತು ಈಗ ಅಗುತ್ತಿರುವ ಘಟನೆಗಳನ್ನು ಸರಿಯಾಗಿ ಊಹಿಸುತ್ತಾಳೆ. ಹಳ್ಲಿಯ ಜನರ ಪ್ರಕಾರ ಈ ಅಜ್ಜಿಗೆ ಅರಳು ಮರಳು. ಸೀತೆ-ಸುಬ್ಬರಾಯನ ಹೆಂಡತಿ. ಜನಾರ್ಧನ-ಸುಬ್ಬರಾಯನ ಸ್ನೇಹಿತ, ಅವನೊಡನೆ ಇವನ ಒಡನಾಟ ಹೆಚ್ಚು. ಕಲ್ಪನೆಗಳು. ವೈಚಾರಿಕತೆ ಮತ್ತು ಪ್ರಶ್ನಿಸುವಿಕೆ«»: ಇದು ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು, ದೇವರ ಅಸ್ತಿತ್ವದ ಕುರಿತು ಪ್ರಶ್ನೆಗಳನ್ನು ಎತ್ತುತ್ತದೆ. ಮೂಕಜ್ಜಿ 'ಆದಿಮ ಮಾತೃಶಕ್ತಿ'ಯಾಗಿ, 'ಸಮಷ್ಟಿ ಅಪ್ರಜ್ಞೆ'ಯ ಪ್ರತೀಕವಾಗಿ ಕಾಣಿಸುತ್ತಾಳೆ. ಕಾಲದ ದರ್ಶನ: ಕಾದಂಬರಿಯು ಐದು ಸಾವಿರ ವರ್ಷಗಳ ಸಂಸ್ಕೃತಿಯ ವಿಕಾಸವನ್ನು ತೆರೆದಿಡುತ್ತದೆ. ಮೂಕಜ್ಜಿಯ ಪಾತ್ರದ ಮೂಲಕ ಆದಿಮ ಮಾನವನಿಂದ ಹಿಡಿದು ಆಧುನಿಕ ಯುಗದವರೆಗಿನ ಮಾನವನ ನಂಬಿಕೆಗಳನ್ನು ವಿಶ್ಲೇಷಿಸುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಷ್ಟಕರ ಓದು: ಹಲವು ಓದುಗರಿಗೆ ಮೊದಲ ಓದಿನಲ್ಲಿ ಕಾದಂಬರಿ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ; ಇದು ಕಾಲ, ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಆಳದಿಂದಾಗಿ. «»ಕಲಾತ್ಮಕ ಶ್ರೇಷ್ಠತೆ«»: ಕಾರಂತರು ಪಾಶ್ಚಾತ್ಯ ಪ್ರಭಾವವಿಲ್ಲದೆ ಆಧುನಿಕ ಚಿಂತನೆಯನ್ನು ಹೇಗೆ ಬಳಸಿದ್ದಾರೆ ಎಂಬುದಕ್ಕೆ ಇದು ಉದಾಹರಣೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. «»ಸಿನಿಮಾದ ಸವಾಲು«»: ಕೃತಿಯ ಆಳವನ್ನು ದೃಶ್ಯ ಮಾಧ್ಯಮದಲ್ಲಿ ತರುವುದು ಕಷ್ಟ ಎಂದು ವಿಮರ್ಶೆಗಳು ಹೇಳುತ್ತವೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

76
Votes
283
Views
7 Months
Since posted

Voting Closed!

Scroll to Top