ಪುಸ್ತಕದ ಶೀರ್ಷಿಕೆ: ದೇವರಾಗಲು ಮೂರೇ ಗೇಣು
ಪುಸ್ತಕದ ಲೇಖಕರು: ಡಾ|| ಶಾಂತಲಾ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಹರ್ಷ ಕೃಷ್ಣ ಭಟ್ ಪಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಪುಸ್ತಕ ಪರಿಚಯ ದೇವರಾಗಲು ಮೂರೇ ಗೇಣು ಕಾದಂಬರಿಯು ಡಾ|| ಶಾಂತಲಾ ರವರ ವೈಜ್ಞಾನಿಕ ರೋಚಕ ಕಾದಂಬರಿ ಈ ಕೃತಿ ವೈಜ್ಞಾನಿಕ ಲೋಕವನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸುವಲ್ಲಿ ಸಮರ್ಥತೆಯನ್ನು ಹೊಂದಿದೆ ಎಲ್ಲಾ ಸತ್ವವನ್ನು ಅಡಗಿಸಿಕೊಂಡಂತಹ ಈ ಕಾದಂಬರಿಯನ್ನು ಓದಲೇಬೇಕು. ಕಥಾಸಾರ: ನಮ್ಮ ಮನಸ್ಸು ಇಲ್ಲಿಯವರೆಗೆ ದೇವರೇ ಮಾಡುವ ಕೆಲಸ ಎಂದು ನಂಬಿರುವ ಜನರ ನಡುವೆ ತಳಿ ವಿಜ್ಞಾನಿಗಳು ತಮಗೆ ಬೇಕಾದ ರೀತಿಯಲ್ಲಿ ವಸ್ತುಗಳನ್ನು ಪಡೆಯುವ ಹಾಗೆ ಮಗುವನ್ನು ಪಡೆಯಲು ಮಾಡಿದ ಪ್ರಯೋಗಗಳು ಫಲಿಸಿದಂತೆ ಕಂಡಾಗ ಆಗುವ ಮನೋಭಾವ ದೇವರೇ!... ನಾನು ದೇವರಿಗಿಂತ ಏನು ಕಡಿಮೆಯೇ ಅಥವಾ ಹೆಚ್ಚೇ ಅಲ್ಲ ಅಲ್ಲಾ ದೇವರಾಗಲು ಮೂರೇ ಗೇಣು. ಹಾಗೆಯೇ ಈ ಪ್ರಪಂಚದಲ್ಲಿ ಸದ್ದು ಮಾಡುತ್ತಿರುವ ಐ.ವಿ.ಎಫ್ ತಂತ್ರಜ್ಞಾನ, ಟೆಸ್ಟ್ ಟ್ಯೂಬ್ ಬೇಬಿ ಮುಂದುವರೆದು ಡಿಸೈನ್ಡ್ ಬೇಬಿ ಆಗುವತನಕ ಕಾದಂಬರಿ ಬರಿ ಇಷ್ಟಾ ಎಂದು ನೋಡಿದರೆ ಅಲ್ಲ ಇಲ್ಲಿ ಮನುಷ್ಯನ ಸ್ವಾರ್ಥ ಸಾಧನೆಯ ಮುಂದೆ ತನ್ನ ಗೆಳೆತನಕ್ಕೆ, ವೃತ್ತಿಗೆ ಹಾಗೂ ಆತ್ಮವಂಚನೆ, ಇನ್ನೊಬ್ಬರ ಬದುಕಿನ ಜೊತೆ ಆಡುವ ಆಟಗಳು ಹಾಗೂ ನಂಬಿಕೆ ದ್ರೋಹಗಳನ್ನು ಎದ್ದು ಕಾಣುವಂತೆ ಕಥೆ ಪ್ರತಿಯೊಂದು ಪುಟದಲ್ಲೂ ಹೇಳುತ್ತದೆ ಅದರೊಂದಿಗೆ ಮುಗ್ಧ ಮನಸುಗಳ ಸ್ವಾರ್ಥವಿಲ್ಲದ ಪ್ರೀತಿಯನ್ನು ಈ ಕಥೆ ಕೊಡುವುದರಲ್ಲಿ ನಿಸ್ಸಂಶಯವಿಲ್ಲ. ಪಾತ್ರಗಳನ್ನು ನೋಡುವುದಾದರೆ: ಡಾ|| ನಿರೂಪಮ ಜೀವಾಳದ ಪಾತ್ರ ತನ್ನ ವೃತ್ತಿ, ವೈಯಕ್ತಿಕ ಬದುಕು ನಿಭಾಯಿಸುವ ಪರಿಯೇ ರಣರೋಚಕ. ಸಾಧಿಸುವಾಗ ವೃತ್ತಿವಂಚನೆ ಆತ್ಮವಂಚನೆ ಆಗಬಾರದು ಎಂದು ಸೃಷ್ಟಿಕರಿಸುವ ಮೆಟ್ಟಿಲಿನಿಂದ ಪ್ರತಿ ಹಂತದಲ್ಲೂ ಮಾಡುವ ತಪ್ಪು ಸರಿ ಕೆಲಸಗಳನ್ನು ತನ್ನ ಗೆಳೆಯರನ್ನು ಪೂರ್ತಿ ನಂಬಿಕೆ ಇಟ್ಟು ಕೊಡುವ ಜವಾಬ್ದಾರಿಯಿಂದ -- ಯಾರನ್ನು ನಂಬದ ಪರಿಸ್ಥಿತಿಯವರೆಗೆ ದಾರೆ ಎರೆವ ಪಾತ್ರ ಎಂದರು ಸುಳ್ಳಾಗಲಾರದು. ಡಾ ಬಾಲಚಂದ್ರ ಸಾಧನೆಯೇ ಬದುಕು ಅದರಲ್ಲಿ ವೃತ್ತಿಗೆ, ಆತ್ಮಕ್ಕೆ ವಂಚಿಸಬಾರದು ಎನ್ನುವ ಪಾತ್ರವಾದರೂ, ಸಂಗಡಿಗರಿಂದ ತನ್ನ ತತ್ವವನ್ನೇ ಬದಲಾಯಿಸಿದವರೆಗೆ ಇರುವ ಪಾತ್ರ. ಡಾ ಹಿತೇಶ್: ತನ್ನ ಹೆಸರನ್ನು ಸಾಧನೆ ಸಾಧನೆಯ ಶಿಖರದ ಮೇಲೆ ಇರಿಸಲು ಯಾವ ಮುಖವಾಡವನ್ನು ಧರಿಸಲು ಸದಾ ಸಿದ್ಧ. ಕೊನೆಗೆ ಗೆಳೆತನಕ್ಕೆ ಇರುವ ಬೆಲೆ ಸಾಧನೆಗೆ ಇರುವ ಬೆಲೆ ಎಲ್ಲವನ್ನು ವಂಚಿಸಿ ಏನೂ ಉಳಿಯದು ಎನ್ನುವುದಕ್ಕೆ ಇರುವ ಪಾತ್ರ. ಹೀಗೆ ಹಲವಾರು ಪಾತ್ರಗಳು ಅನೇಕ ಜೀವನದ ಪ್ರಮುಖತೆಯನ್ನು ತೆರೆದಿಡುವ ಪಾತ್ರಗಳಲ್ಲಿ ಹಳ್ಳಿ ಜನರ ಪಾತ್ರಗಳು ಮನಸ್ಸು ತುಂಬಾ ಮೃದು ಏನು ವೈದ್ಯಕೀಯ ಜ್ಞಾನವಿಲ್ಲದಿದ್ದರೂ ಅವರಿಗೆ ಆದ ಅನುಭವದಲ್ಲಿ ಕೇಳುವ ಪ್ರತಿ ಪ್ರಶ್ನೆಯು ತುಂಬಾ ವಿಚಾರವಂತದ್ದು ಎನ್ನುವುದನ್ನು ಮರೆಯುವಂತಿಲ್ಲ. ಸಂದೇಶ: ಮನುಷ್ಯನ ಸ್ವಾರ್ಥ ಸಾಧನೆ ಮತ್ತು ವೈಜ್ಞಾನಿಕ ಲೋಕದ ಸಾಧನೆ ಅಥವಾ ಯಾವ ಪಥದಲ್ಲಿ ನಮ್ಮ ಸಾಧನೆಯು ಮುಂದುವರಿಯುತ್ತಿದೆ. ಮನುಷ್ಯನ ಬದುಕನ್ನೇ ನರಕವಾಗಿಸುವ ಹಂತಕ್ಕೆ ಸಂಶೋಧನೆ ಬರಬಾರದು ಹಾಗೆಯೆ ಪ್ರತಿಯೊಬ್ಬರಿಗೂ ಸಂಸಾರ, ಗೆಳೆತನ, ವೃತ್ತಿ ಮತ್ತು ವೈಯಕ್ತಿಕ ಬದುಕು, ಆತ್ಮ ತೃಪ್ತಿ ಜೀವನದಲ್ಲಿ ಇರಬೇಕು ಎನ್ನುವ ಸಂದೇಶವನ್ನು ಒಳಗೊಂಡಿರುವ ಕಾದಂಬರಿ. ವೈಯಕ್ತಿಕ ಅಭಿಪ್ರಾಯ : ಮೊದಲು ವೈಜ್ಞಾನಿಕ ಕಾದಂಬರಿಯಲ್ಲಿ ರೋಚಕತೆ ಮೂಡಿಸಿರುವುದೇ ಒಂದು ಸಾಧನೆ ವೈದ್ಯ ಲೋಕದ ಎಷ್ಟೋ ಪದಗಳೇ ತಿಳಿಯದು ಅದರಲ್ಲೂ ಈ ಕಾದಂಬರಿಯಲ್ಲಿ ಬರೆದ ಕನ್ನಡ ತುಂಬಾ ಹಿತವಾದ ಕನ್ನಡ ಏಕೆಂದರೆ ಇದು ಯಾರಿಗೂ ಅರ್ಥವಾಗದೆ ಇರದು ನನ್ನಂತಹ ಸಾಮಾನ್ಯ ವರ್ಗಕ್ಕೂ. ಶ್ರೀಮಂತಿಕೆಯಲ್ಲಿರುವ ಸ್ವಾರ್ಥ ಸಾಧನೆ, ಹಳ್ಳಿಯವರಲ್ಲಿ ಇರುವ ಮುಗ್ಧತೆ, ಸಿರಿವಂತರು ಡಿಸೈನ್ಡ್ ಬೇಬಿಸ್ ಮಾಡುವ ಹಂಬಲ, ಅದೇ ಹಳ್ಳಿಯವರು ತನಗೆ ಒಂದು ಆರೋಗ್ಯವಂತ ಮಗು ಆದರೆ ಸಾಕು ಎನ್ನುವ ಎರಡು ಮನಸ್ಥಿತಿಗಳನ್ನು ಕಾಣಬಹುದು ಮೊದಲ ಪುಟದಿಂದ ಇಂತಹ ಸನ್ನಿವೇಶ ಮುಂದಕ್ಕೆ ಇದು ನಂಬಿಕೆಗೆ ಬದಲಾಗುತ್ತ ತನ್ನವರು ಎಂದು ನಂಬಿರುವವರೇ ಮೋಸ ಮಾಡುವುದು, ಇವರೇ ಎಲ್ಲಾ.....ಇದು ಇವರೇ ಅಲ್ಲ...ಎನ್ನುವಂತೆ ಕಾಣುವ ಹಂತಗಳು. ಇವರು ಹೀಗೆಯೇ ಎಂದು ತಿಳಿದದ್ದೇ ಒಂದು ಕಡೆಯಾದರೆ, ಅದು ಸುಳ್ಳಾಗುವಿಕೆ ಇನ್ನೊಂದು ಕಡೆ. ನಿಜವಾದ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ವೈಜ್ಞಾನಿಕ ರೋಚಕ ಕಾದಂಬರಿಯನ್ನು ನಮ್ಮ ಕೈಗಿಟ್ಟ ನಿಮಗೆ ಬೃಹತ್ ವಂದನೆಗಳು. ತಳಿವಿಜ್ಞಾನಿ ಮಾಡುವ ಸಂಶೋಧನೆ ಎಷ್ಟು ಸುಖ ಮತ್ತು ದುಃಖಗಳಿಗೆ ಕಾರಣ, ಶ್ರೀಮಂತ ಕುಟುಂಬದ ಗಂಡ ಹೆಂಡತಿಯ ಆಸೆಯೋ ದುರಾಸೆಯೋ ತಮ್ಮ ಮುಂದಿನ ಸಂತಾನ ಸಣ್ಣ ವಯಸ್ಸಿನಲ್ಲೇ ತುಂಬಾ ಪ್ರಬಲವಾದ ಸಾಧನೆ ಮತ್ತು ಜಾಣ್ಮೆಯ ಕಿರೀಟವಿರಬೇಕೆಂಬ ಕೆಟ್ಟ ಹಂಬಲ, ಸಿರಿವಂತ ಸಾಧಕರು ಕಳ್ಳ ದಾರಿಯಲ್ಲಿ ಕೇಳಿ ಮಾಡಿಸಿಕೊಳ್ಳುವಂತಹ ಡಿಸೈನ್ ಬೇಬಿ ಯಾವ ಸಂಕಷ್ಟಕ್ಕೆ ಈಡು ಮಾಡಿತು ಎಂದು ಸ್ಪಷ್ಟೀಕರಣ ಈ ಕಾದಂಬರಿಯ ಹೆಮ್ಮೆ. ಇಲ್ಲಿ ವ್ಯಕ್ತಿಗೆ ವಂಚನೆಯೇ, ಬದುಕಿಗೆ ವಂಚನೆಯೇ, ವೃತ್ತಿಗೆ ವಂಚನೆಯೇ, ಆತ್ಮಕ್ಕೆ ವಂಚನೆಯೇ ನಾವೇ ತಿಳಿಯಬೇಕು. ಪ್ರತಿದಿನದಲ್ಲೂ ಕಾಣುವ ವ್ಯಕ್ತಿಗಳು ಈ ಕಾದಂಬರಿಯ ತಿರುಳು ಪ್ರತಿ ವಿಷಯವು ದೈನಂದಿನ ಸಾಧನ ವಿಷಯವು. ಸಾಧನೆ ಮುಖ್ಯವೋ, ಆರೋಗ್ಯಕರ ಬದುಕು ಪರಿಪೂರ್ಣವೋ ಎಂಬುದು ಸೃಷ್ಟಿಕರಿಸಿದೆ, ಒಂದು ಕಡೆಯಲ್ಲಿ ತನ್ನ ಹೆಸರನ್ನು ಉಳಿಸಿಕೊಳ್ಳುವ ಆಸ್ಪತ್ರೆಯ ಆಡಳಿತ ವರ್ಗ, ಡಾಕ್ಟರಿಗೂ ಸಿಗದ ಭದ್ರತೆ, ತನ್ನ ಹೆಸರನ್ನು ಜಗತ್ತಿಗೆ ಮುಟ್ಟಿಸಲು ಸಹಪಾಠಿಗಳನ್ನು ಮೃತ್ಯು ಕೋಪಕ್ಕೆ ತಳ್ಳುವ ಪಾತ್ರಗಳು ‘ಪ್ರಾಜೆಕ್ಟ್ ಸುಮೆದಾ’ದಿಂದ ‘ಆಪರೇಷನ್ ಸುಮೇದ’ವರೆಗಿನ ಕಾದಂಬರಿ ಓದಿ ನೋಡಿದರೆ ಅದಕ್ಕೊಂದು ಗೌರವ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಗಂಡನ ಮಾತನ್ನು ಕೇಳದ ಡಾ|| ನಿರೂಪಮ ಒಂದು ಸತ್ಯವನ್ನು ಹೇಳಿದಳು ಡಾ. ಹಿತೇಶ್ ಅವರೊಂದಿಗೆ ಇದು ಅವರು ಇಟ್ಟ ಮೊದಲ ತಪ್ಪು ಹೆಜ್ಜೆ. ತನ್ನ ತಲೆಗೆ ತನ್ನ ಹೆಸರು ಈ ಪ್ರಪಂಚದಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕೆಂಬ ಭಾವ ಬಂದರೆ ಅವರ ಸ್ವಂತ ಭಾವನೆಗಳನ್ನು, ಗೆಳೆಯರನ್ನು, ಸ್ವಂತದವರನ್ನು ಯಾವ ಕೋಪಕ್ಕೂ ತಳ್ಳಲು ಭಯಪಡದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎನ್ನುವ ಈ ಒಂದು ಕಾಲ ತುಂಬಾ ಮನಸ್ಸಿಗೆ ನೋವನ್ನು ಮಾಡಿದ ಕ್ಷಣ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ವೈಜ್ಞಾನಿಕ ಸಂಶೋಧನೆ, ರೋಚಕ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಹಲವಾರು ಸಂಗತಿಗಳನ್ನು ಒಳಗೊಂಡಂತಹ ಕಾದಂಬರಿ ಯಾರಿಗೆ ಇಷ್ಟವಾಗುವುದು ಅವರಿಗೆ ಈ ಕಾದಂಬರಿ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.