ಪುಸ್ತಕದ ಶೀರ್ಷಿಕೆ: ಪ್ರೀತಿಸುವವರನ್ನು ಕೊಂದುಬಿಡಿ
ಪುಸ್ತಕದ ಲೇಖಕರು: ಜೋಗಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪಿನಾಕಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಪ್ರೀತಿಸುವವರನ್ನು ಕೊಂದುಬಿಡಿ" ನೀವು ಜೀವಿಸುತ್ತಿರುವುದು ಜೀವನವೇ ಅಲ್ಲ, ಪ್ರೀತಿಸುತ್ತಿರುವುದು ಪ್ರೀತಿಯೇ ಅಲ್ಲ, ನಿಜವೆಂದರೆ ನಿಜವಲ್ಲ, ಸುಳ್ಳೆಂದರೆ ಸುಳ್ಳಲ್ಲ, ಪ್ರಶ್ನೆ ಮಾಡುತ್ತಾ ಹೋದರೆ ನಿಮ್ಮನ್ನು ಯಾರೂ ಪ್ರೀತಿಸುವುದಿಲ್ಲ, ಒಂದು ವೇಳೆ ಉತ್ತರ ಸಿಕ್ಕರೆ, ಅದು ನೀವು ಬಯಸಿದ ಉತ್ತರವೇ ಎನ್ನುವ ಗೊಂದಲ ಮೂಡುತ್ತದೆ, ಹೀಗೆ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿ, ಉತ್ತರಿಸದೆ ನಮ್ಮ ನಮ್ಮ ವಿವೇಚನೆಗೆ ಬಿಡುತ್ತಾರೆ ಲೇಖಕರು... ಪ್ರೀತಿಸುವವರನ್ನು ಕೊಂಡುಬಿಡಿ... ಅಯ್ಯೋ ಏನಿದು..!? ಪ್ರೀತಿಸುವವರನ್ನು ಸಾಯಿಸುವುದ...??? ಅಂತ ಅಂದುಕೊಳ್ಳುವವರು ಈ ಪುಸ್ತಕ ಓದಿದ ನಂತರ ಕೊಲೆಗಾರರಾಗುವುದು ಖಂಡಿತ. ಏಕೆಂದರೆ ಸಾಯದೆ ಸ್ವರ್ಗವಿಲ್ಲ... ನೀವು ಈ ಪುಸ್ತಕ ಓದಿ ಮುಗಿಸಿದ ಮೇಲೆ ಕೊಲೆ ಮಾಡಲು ಸಿದ್ಧರಾಗುವಿರಿ... ನೀವು ಪ್ರೀತಿಸುವವರಾದರೆ, ಪ್ರೀತಿಸದೆ ಇದ್ದರೂ, ಪ್ರೀತಿ ಮಾಡಬಾರದೆಂದು ನಿರ್ಧರಿಸಿದ್ದರೂ, ಮುಂದೆ ಪ್ರೀತಿ ಮಾಡಬೇಕೆಂದುಕೊಂಡಿದ್ದರೆ, ಪ್ರೀತಿಯ ಬಗ್ಗೆ, ಪ್ರೀತಿಸುವವರ ಬಗ್ಗೆ ತಿಳಿದುಕೊಳ್ಳಬಯಸುವವರು, ಹೀಗೆ ಮುಂತಾದವರು, ಹಾಗೂ ಎಲ್ಲರೂ ಓದಬಹುದಾದಂತಹ ಹಾಗೂ ಓದಲೇಬೇಕಾದಂತಹ ಕೃತಿ ಇದು... ನೀವೂ ಒಂದು ಬಾರಿ ಓದಿ, ಪ್ರೀತಿ ಬಿಟ್ಟು ಏನಿದೆ ಬದುಕಲ್ಲಿ...?
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಪ್ರೀತಿಸುತ್ತಿರುವವರು, ಪ್ರೀತಿಸಿ ಬೇರೆಯಾದವರು, ಪ್ರೀತಿಸಬೇಕೆಂದಿರುವವರು, ಪ್ರೀತಿ ಮಾಡದವರು, ಪ್ರೀತಿಯ ಕುತೂಹಲವಿರುವವರು...
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.