Submission 1997

ಪುಸ್ತಕದ ಶೀರ್ಷಿಕೆ: ಮ್ಯಾನೇಜ್ಮೆಂಟ್ ಭಗವದ್ಗೀತೆ

ಪುಸ್ತಕದ ಲೇಖಕರು: ಮಹಾಬಲ ಸೀತಾಳಭಾವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಚೇತನ ಭಾರ್ಗವ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನನಗೆ ಇತ್ತೀಚಿನ ಪುಸ್ತಕಗಳಲ್ಲಿ ಬಹಳವಾಗಿ ಮನಸ್ಸಿಗೆ ಹಿಡಿಸಿದ ಪುಸ್ತಕ ಮಹಾಬಲ ಸೀತಾಳ ಬಾವಿಯವರು ಬರೆದ ""ಮ್ಯಾನೇಜ್ ಮೆಂಟ್ ಭಗವದ್ಗೀತೆ"" ಶೀರ್ಷಿಕೆ ನೋಡಿದಾಗ ಮ್ಯಾನೇಜ್ಮೆಂಟ್ ಗೂ ಭಗವದ್ಗೀತೆಗೂ ಎತ್ತಣದಿಂದ ಎತ್ತಣ ಸಂಬಂಧ ಎಂದೆನಿಸಿದರೂ, ಪುಸ್ತಕ ಓದುತ್ತಾ ಹೋದಂತೆ ಭಗವದ್ಗೀತೆಯ ವಿಷಯಗಳನ್ನು ಹಾಗೂ ಶ್ರೀ ಕೃಷ್ಣ ಅರುಹಿದಂತಹ ಉಪದೇಶಾಮೃತವನ್ನು ಈಗಿನ ಮ್ಯಾನೇಜ್ಮೆಂಟ್ ಪರಿಭಾಷೆಗೆ ಸಮೀಕರಿಸಿ ಬರೆದಂತಹ ಮಹಾಬಲ ಅವರು ಭಗವದ್ಗೀತೆಯಲ್ಲಿ ಇರದೇ ಇರುವುದು ಏನೂ ಇಲ್ಲ, ಇದರ ಸಾರ್ವಕಾಲಿಕ ಅನ್ವಯತೆಯನ್ನು ಮ್ಯಾನೇಜ್ಮೆಂಟ್ ಕ್ಷೇತ್ರದ ಮುಖಾಂತರ ಅಭಿವ್ಯಕ್ತಿಗೊಳಿಸಿದ್ದಾರೆ. ಇಂದು ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದ ಸೂತ್ರಧಾರ ಶ್ರೀ ಕೃಷ್ಣ ದೈವಾಂಶ ಸಂಭೂತ ಹಾಗೂ ಅವತಾರ ಪುರುಷನೆಂದು ಪೂಜನೀಯ. ಆದರೆ ಆತನ ತಂತ್ರಗಾರಿಕೆ ಹಾಗೂ ಭಗವದ್ಗೀತೆಯ ಉಪದೇಶದ ಹಿಂದೆ ಅಡಗಿರುವ ಮ್ಯಾನೇಜ್ಮೆಂಟ್ ಕ್ಷೇತ್ರದ ಜಾಣ್ಮೆ, ಕೌಶಲ್ಯ ಹಾಗೂ ಉಪಯುಕ್ತ ವಿಷಯಗಳು ಇಂದು ಆಕ್ಸ್ಫರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ವಸ್ತುವಾಗಿವೆ. ಕೃಷ್ಣನಂತಹ ಮ್ಯಾನೇಜ್ಮೆಂಟ್ ಗುರು ಇನ್ನಿಲ್ಲ ಎಂಬ ಅಭಿಪ್ರಾಯ ಪಾಶ್ಚಾತ್ಯ ಮ್ಯಾನೇಜ್ಮೆಂಟ್ ವಿದ್ವಾಂಸಕರಿಂದ ವ್ಯಕ್ತವಾಗುತ್ತಿರುವುದು ಅತಿಶಯೋಕ್ತಿಯಲ್ಲ. ಈ ಪುಸ್ತಕ ಇಂದಿನ ಮ್ಯಾನೇಜ್ಮೆಂಟ್ ಗುಣ ಧರ್ಮಗಳಿಗೆ ತಕ್ಕಂತೆ ಭಗವದ್ಗೀತೆಯ ಶ್ಲೋಕವನ್ನು ಅನ್ವಯಿಸಿ ಬರೆದಿದ್ದರಿಂದ ಬಹಳ ಪ್ರಸ್ತುತವಾಗಿದೆ. ಕೃಷ್ಣ ಒಬ್ಬ ಮ್ಯಾನೇಜ್ಮೆಂಟ್ ಗುರು. ಅರ್ಜುನ ಒಬ್ಬ ನುರಿತ ಸಿಇಒ. ಔದ್ಯಮಿಕ ಕ್ಷೇತ್ರವನ್ನು ಕುರುಕ್ಷೇತ್ರಕ್ಕೆ ಹೋಲಿಸಿಕೊಂಡರೆ ಧರ್ಮ ಮಾರ್ಗದಲ್ಲಿ ಬಿಸಿನೆಸ್ ಮಾಡಲು ಕೃಷ್ಣನಂತಹ ಮ್ಯಾನೇಜ್ಮೆಂಟ್ ಗುರು, ಅರ್ಜುನ ನಂತಹ ಸಿಇಒ ಅಗತ್ಯ. ಅರ್ಜುನನ ಕೌಶಲ್ಯವನ್ನು ಅರಿತೆ ಆತನನ್ನು ಮುನ್ನಡೆಸುವ ಕೃಷ್ಣ ತನ್ನ ತಂತ್ರಗಾರಿಕೆಗಳಿಂದ ಮ್ಯಾನೇಜ್ಮೆಂಟ್ ಪಾಠವನ್ನೇ ಹೇಳುತ್ತಾನೆ. ಒಟ್ಟಾರೆ ತನ್ನ ಗುರಿ ಏನು ತನ್ನ ಜೊತೆ ನಿಂತಿರುವ ಬಂಧುಗಳು ಸೈನಿಕರು (ಇಲ್ಲಿ ಅವರನ್ನು ಕಂಪನಿಯ ನೌಕರರು ಎಂದು ಹೋಲಿಸಲಾಗಿದೆ) ಎಷ್ಟು ಅವರ ಕಾರ್ಯ, ಸಾಮರ್ಥ್ಯವೇನು, ಅವರ ನ್ಯೂನ್ಯತೆಗಳೇನು (ರಿಸೋರ್ಸ್ ಅನಾಲಿಸಿಸ್) ಹಾಗೂ ವಿಷಮ ಪರಿಸ್ಥಿತಿಗಳೇನು, ಅವುಗಳ ನಿರ್ವಹಣೆ ಹೇಗೆ (ರಿಸ್ಕ್ ಅಸೆಸ್ಮೆಂಟ್) ಇದಕ್ಕೆ ಕಾರ್ಯತಂತ್ರಗಳ ಹಣೆಯುವಿಕೆ ಹಾಗೂ ನಿರ್ವಹಣೆ (ಸ್ಟ್ರ್ಯಾಟಜಿಕ್ ಪ್ಲಾನಿಂಗ್ ಅಂಡ್ ಎಕ್ಸಿಕ್ಯೂಷನ್). ಇದರಲ್ಲಿ ಕೃಷ್ಣನ ಮ್ಯಾನೇಜ್ಮೆಂಟ್ ಚಾತುರ್ಯ ಅತ್ಯುನ್ನತ ಮಟ್ಟದಾಗಿದೆ. ದೃತರಾಷ್ಟ್ರನನ್ನು ಒಟ್ಟಾರೆ ಕುರು ರಾಜ್ಯದ ಮಾಲೀಕ ಎಂದು ಸಂಭೋಧಿಸುವ ಮಹಾಬಲ ಅವರು, ಆತನ ಕೇಳುವ ಗುಣವನ್ನು ಹಾಗೂ ಒಟ್ಟಾರೆ ತನ್ನಿ ಮಕ್ಕಳ ಮಮಕಾರದಿಂದ ತೆಗೆದುಕೊಳ್ಳುವ ಏಕಮುಖ ನಿರ್ಧಾರಗಳಿಂದ ಕಂಪನಿಗೆ ಆಗುವ ದುಷ್ಪರಿಣಾಮಗಳನ್ನು ಧೃತರಾಷ್ಟ್ರನ ಅಂಧ ವ್ಯಾಮೋಹಕ್ಕೆ ಹೋಲಿಸಿ ಬರೆದಿದ್ದಾರೆ. ಒಟ್ಟಿನಲ್ಲಿ ಮ್ಯಾನೇಜ್ಮೆಂಟ್ ಭೂತಗನ್ನಡಿಯಲ್ಲಿ ಭಗವದ್ಗೀತೆಯ ಶ್ಲೋಕ ಮಹಾಭಾರತದ ಪಾತ್ರ ಹಾಗೂ ಕೃಷ್ಣನ ಮಹೋನ್ನತ ಚಾತುರ್ಯವನ್ನು ವಿಶದೀಕರಿಸುವ ಮಹಾಬಲ ಅವರ ಮ್ಯಾನೇಜ್ಮೆಂಟ್ ಭಗವದ್ಗೀತೆ ಒಂದು ಅಪರೂಪದ ಪುಸ್ತಕ ಪ್ರತಿಯೊಬ್ಬರ ಗ್ರಂಥಾಲಯದಲ್ಲಿರಲಿ. ಈ ಮೂಲಕ ನಮ್ಮೆಲ್ಲರ ಮಸ್ತಕ ಬೆಳಗಲಿ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಇಲ್ಲಿ ಮನಸ್ಸಿನಲ್ಲಿ ಉಳಿಯುವ ಹಾಗೂ ಮನತಟ್ಟುವ ಪಾತ್ರವೆಂದರೆ ಕೃಷ್ಣನದೇ. ಕೃಷ್ಣನ ದೈವೀಕತೆಯನ್ನು ಮ್ಯಾನೇಜ್ಮೆಂಟ್ ಗುರುವಿನ ರೂಪದಲ್ಲಿ ಸಮೀಕರಿಸಿ ಪಾತ್ರವನ್ನು ಕಟ್ಟಿಕೊಡುವ ಮ್ಯಾನೇಜ್ಮೆಂಟ್ ಭಗವದ್ಗೀತೆ ಕೃಷ್ಣನನ್ನು ಗುರು ಎಂದೊಡನೆ ಮ್ಯಾನೇಜ್ಮೆಂಟ್ ಕೌಶಲಗಳನ್ನು ಹೇಳಿಕೊಡುವ ಮೆಂಟರ್ ಎಂದು ಪರಿಭಾವಿಸಿ ಆ ಮೂಲಕ ಅರ್ಜುನನಂತೆ ನಾವೆಲ್ಲರೂ ಕಾರ್ಯೋನ್ಮುಖರಾಗುವುದು ಈ ಕ್ಷಣದ ಅಗತ್ಯತೆ ಅದು ಯುದ್ಧದಂತೆ ಅನಿವಾರ್ಯವೂ ಹೌದು. ಈ ಭಿನ್ನ ನಿರೂಪಣೆಯಿಂದಾಗಿ ಪುಸ್ತಕ ಓದುಗರ ಮನ ತಟ್ಟುತ್ತದೆ .

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಪುಸ್ತಕ ಎಲ್ಲಾ ವರ್ಗದ ಓದುವರಿಗೂ ಸಲ್ಲುತ್ತದೆ ಅದರಲ್ಲೂ ವಿದ್ಯಾರ್ಥಿಗಳಿಗೆ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಸೇವಾ ಕ್ಷೇತ್ರದಲ್ಲಿ ಇರುವಂತಹ ಅವರಿಗೆ ಮಾರ್ಗದರ್ಶಿಯಾಗಿ ಕೈಪಿಡಿಯಂತೆ ಇಟ್ಟುಕೊಳ್ಳಬಹುದಾಗಿದೆ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
68
Views
7 Months
Since posted

Voting Closed!

Scroll to Top