ಪುಸ್ತಕದ ಶೀರ್ಷಿಕೆ: ಸರ್ಪಭ್ರಮೆ
ಪುಸ್ತಕದ ಲೇಖಕರು: ಎಮ್.ಆರ್. ದತ್ತಾತ್ರಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಆದರ್ಶ ಕುಂದಾಪುರ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಬದುಕಿನ ಸಾರ್ಥಕತೆ ಯಾವುದು? ಸಾಧನೆಯೆ? ಅಲ್ಲಾ.. ಬೆಳೆದು ಬಂದ ಹಾದಿಯನ್ನು ಮರೆಯದೆ ತನ್ನಂತೆ ಇನ್ನೊಬ್ಬರನ್ನು ದಡ ತಲುಪುವಂತೆ ಮಾಡುವುದಲ್ಲವೆ...? ಕಾರಂತರ ಬರವಣಿಗೆಯನ್ನು ಇಷ್ಟಪಡುವ ನನಗೆ ದತ್ತಾತ್ರಿಯವರ ಪುಸ್ತಕ ಇಷ್ಟವಾಗಲು ಜಾಸ್ತಿ ಪುಟಗಳು ಬೇಕಾಗಿರಲಿಲ್ಲ. ಜೀವನ ಮೌಲ್ಯಗಳು, ಸತ್ಯಾನ್ವೇಷಣೆ, ಹುಡುಕಾಟ, ನೊಂದ ಜೀವಗಳು- ಗಟ್ಟಿ ಪಾತ್ರಗಳು ಕಾರಂತರನ್ನು ನೆನಪಿಸಿತ್ತು. ತತ್ವಶಾಸ್ತ್ರದ ಚೌಕಟ್ಟಿನ ಸುತ್ತ ಹೆಣೆದಿರುವ ಕಥೆ. ಜೀವನವು ಪಾಠವನ್ನು ಕಲಿಸುತ್ತದೆ, ಕಲಿಯಬೇಕು. ಕಲಿಯದಿದ್ದರೆ ಇನ್ನೊಮ್ಮೆ ಕಲಿಸುತ್ತದೆ. ಎಲ್ಲಿಯ ತನಕ? ಕಲಿಯುವ ತನಕ. Life gives second Chance. ತಿಳಿದು-ಅರಿತು ಬಾಳುವುದೇ ಜೀವನ. ಮನೆಯ ಹೊಸ್ತಿಲಿನಲ್ಲಿ ಸಿಕ್ಕ ಮಗುವನ್ನು ಒಂದು ಅಜ್ಜ-ಅಜ್ಜಿ ತಂದು ಬಳೆಸುತ್ತಾರೆ. ಅವರ ಮಗ ಟಿಬಿ ಬಂದು ಹಾಸಿಗೆ ಹಿಡಿಯುತ್ತಾನೆ, ಸೊಸೆ ಓಡಿ ಹೋಗುತ್ತಾಳೆ. ಸಿಕ್ಕ ಮಗು ದೊಡ್ಡವನಾಗಿ ಮನೆ ಜವಬ್ದಾರಿ ಹೊರುವಂತಾಗುತ್ತದೆ. ಪರಿಶ್ರಮ ಮತ್ತೆ ವಿಧಿ ಅವನನ್ನು ಗಣಿತದಲ್ಲಿ ಪಿ,ಹೆಚ್,ಡಿ, ಗಳಿಸಿ ಜೀವನದಲ್ಲಿ ಸಾಧಕನಾಗಿಸುತ್ತದೆ. ಅಷ್ಟೇ ಸಾಕೇ? ಇಲ್ಲಿಗೆ ಜೀವನ ಪರಿಪೂರ್ಣವಾಯ್ತಾ? ತನ್ನಂತೆ ಅಪ್ಪ - ಅಮ್ಮ ಇಲ್ಲದ ಮಗುವನ್ನು ದತ್ತು ತೆಗೆದುಕೊಂಡು ಅದನ್ನು ತನ್ನಂತೆ ರೂಪಿಸುವ ಮನೋಭಾವ ಎಷ್ಟು ದೊಡ್ಡದು. ತಾನು ಪಡೆದುಕೊಂಡಿದ್ದನ್ನು ಇನ್ನೊಬರಿಗೆ ಕೊಟ್ಟು ಹೋದಾಗ ಅಲ್ಲವೇ ಜೀವನ ಪರಿಪೂರ್ಣವಾಗುವುದು... ಇದೊಂದಲ್ಲದೆ ಇನ್ನು ಹಲವಾರು ಸನ್ನಿವೇಶಗಳು ಇಲ್ಲಿ ಸಿಗುತ್ತದೆ. ಒಂದೊಳ್ಳೆ ಜೀವಾನಾನುಭವ ಕೊಟ್ಟ ಕೃತಿ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಜೀವನದ ಕಷ್ಟಗಳ ನಡುವೆ ತಮ್ಮ ಜೀವನವನ್ನು ಸಾರ್ಥಕತೆಯ ಎಡೆಗೆ ಕೊಂಡು ಹೋಗುವ ಇಲ್ಲಿನ ಕಥಾನಾಯಕ ನಿಜಕ್ಕೂ ತುಂಬಾ ಇಷ್ಟವಾಗುತ್ತಾನೆ. "ಜಗತ್ತು ಪ್ರೀತಿಸುವುದಷ್ಟನ್ನೇ ನಾವೂ ಪ್ರೀತಿಸುವುದಾದರೆ ಉಳಿದವನ್ನು ಪ್ರೀತಿಸಲು ಯಾರಿದ್ದಾರೆ?" ಈ ಸಾಲು ಎಂದಿಗೂ ಕಾಡುತ್ತದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಕಾರಂತ, ಭೈರಪ್ಪ ಅವರ ಕಾದಂಬರಿ ಓದುವವರಿಗೆ ಈ ಪುಸ್ತಕ ಇಷ್ಟವಾಗುತ್ತದೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.