ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಹನಾ ಹಿರೇಮಠ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಹೇಳಿ ಹೋಗು ಕಾರಣ - ಬಿಡುಗಡೆಗೊಂಡು ಎರಡು ದಶಕಗಳೇ ಕಳೆದಿವೆ, ಇತ್ತೀಚೆಗೆ ಓದಿದ ಪುಸ್ತಕ ಇದು ಓದುತ್ತಾಹೋದಂತೆ ಆಶ್ಚರ್ಯ,ಸಂತೋಷ,ಕುತೂಹಲ,ಆಘಾತ, ದುಃಖ,ಸಂಕಟ, ಕೋಪ, ಅಸಹನೆ ಇನ್ನು ಅನೇಕ ಭಾವನೆಗಳನ್ನು ಅನುಭವಿಸಿದ್ದು ಬಹುಷಃ ಈ ಪುಸ್ತಕ ಓದುವಾಗಲೇ ಅನ್ನಿಸುತ್ತೆ,ಅದೆಷ್ಟೋ ಪ್ರೇಮ ಕಥೆಗಳನ್ನ ನೋಡಿರ್ತೀರಿ,ಕೇಳಿದ್ದೀರಿ ಪ್ರತಿಯೊಬ್ಬರ ಜೀವನಕ್ಕೂ ತುಂಬಾ ಹತ್ತಿರವಾಗಿರುವಂತ ಪ್ರೀತಿ ಕಥೆ ಇದು, ಇದರಲ್ಲಿ ಬರುವ ಪ್ರಮುಖ ಪಾತ್ರಗಳು: ಹಿಮವಂತ ನಿಜಕ್ಕೂ ಹಿಮಾಲಯದಷ್ಟು ವಿಶಾಲವಾದ ವ್ಯಕ್ತಿತ್ವದ ಹೃದಯವಂತ,ಪ್ರಾರ್ಥನಾ ನಯವಂಚಕಿ,ಊರ್ಮಿಳಾ ಗಟ್ಟಿಗಿತ್ತಿ, ದೇಬು ಪರಮ ಪಾಪಿ,ನಿಜಕ್ಕೂ ಪದಗಳಿಗೆ ನಿಲುಕದ ಘಟನೆಗಳು,ಒಬ್ಬ ಸಿಹಿ ಪದಾರ್ಥ ಮಾಡಿ ಮಾರುವ ಹುಡುಗ ಮುಂದೆ ಪ್ರೀತಿಗಾಗಿ ಒಂದು ಆಸ್ಪತ್ರೆ, ಲೇಔಟ್, ಮನೆ ಅಲ್ಲಾ ಊರನ್ನೇ ಕಟ್ಟುತ್ತಾನೆ ಅಂದ್ರೆ ಅದು ಪ್ರೀತಿಗೆ ಇರುವ ಶಕ್ತಿ.ಆದರೆ ಪ್ರಾಮಾಣಿಕ ಪ್ರೀತಿಗೆ ಆಯಸ್ಸು ಕಡಿಮೆ,ಪ್ರಾರ್ಥನಾರಂತವರು ಆ ಪ್ರೀತಿಗೆ ದೇವರ ಹೆಸರಿಟ್ಟು ದೇವರಿಗೂ ಮೋಸ ಮಾಡುವ ಜಾಣರು.ಛೇ, ಛೇ...ಮೋಸ ಅಲ್ಲ ದ್ರೋಹವದು. ಆ ದಟ್ಟ ಕತ್ತಲಿನ ರಾತ್ರಿಯಲ್ಲಿ ಚನ್ನರಾಯಪಟ್ಟಣ ದಿಂದ ಶಿವಮೊಗ್ಗವರೆಗೂ ನಡೆದು ಬಂದು, ಒಂದೇ ಚಾಪೆ, ಒಂದೇ ಸೂರಿನಡಿ ಬದುಕುತ್ತೀದ್ದ ಜೀವಕ್ಕೆ ಕನಸಿನ ಬಾಗಿಲ ತೆಗೆದು, ಆ ಕನಸುಗಳಿಗೆ ಜೀವ ತುಂಬಿ ರೆಕ್ಕೆ ಕಟ್ಟಿ ಬಾನಿನೆತ್ತರ ಹಾರಾಡುವ ಶಕ್ತಿ ಕೊಟ್ಟವರಿಗೆ ಕಾರಣವಿಲ್ಲದೇ ಬಿಟ್ಟು ಹೋಗುವ ಹೃದಯವಿದ್ರಾವಕ ಕಥೆ. ದ್ರೋಹ ಬಗೆದ ಪ್ರೀತಿಗೆ ಜೀವನವೇ ಧಾರೆ ಎರೆದ ಹಿಮವಂತ ನಿಜಕ್ಕೂ ಓದುಗರ ಮನಸ್ಸಿನಲ್ಲಿ ಚಿರಕಾಲ ಉಳಿಯುವ ಜೀವಾತ್ಮ-ಪರಮಾತ್ಮ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
"ಪ್ರೀತಿ ಅಂದರೆ " ಅವಶ್ಯಕತೆಗಳಿಗೆ ಹುಟ್ಟಿಕೊಳ್ಳುವುದು ಪ್ರೀತಿಯಲ್ಲ. ಅದು ಹೊಂದಾಣಿಕೆ. ಬೆಳಗ್ಗೆ ಎದ್ದು ರೇಡಿಯೋದಲ್ಲಿ ಸಿನೆಮಾ ಹಾಡು ಕೇಳುವ ಹುಡುಗಿ ಯಾರನ್ನಾದರೂ ಪ್ರೀತಿಸಲೇಬೇಕು ಅಂತ ನಿರ್ಧರಿಸಿದರೆ, ಸಂಜೆ ಹೊತ್ತಿಗೆ ಅವಳಿಗೊಂದು ಪ್ರೀತಿ ಸಿಕ್ಕುಬಿಡುತ್ತದೆ. ಕೈ ಚಾಚಿದ ಹುಡುಗಿಯನ್ನು ತಿರಸ್ಕರಿಸುವ ಹುಡುಗರು ಜಗತ್ತಿನಲ್ಲಿ ತೀರ ಅಪರೂಪ. ಅದಲ್ಲ ತಾನು ಬಯಸಿದ್ದು. ಒಂದು ಪ್ರೀತಿ ಉದ್ಭವವಾಗಲಿಕ್ಕೆ ನೂರು ಜರೂರತ್ತುಗಳು ಸೃಷ್ಟಿಯಾಗಬೇಕು. ಕನಸುಗಳ ಫಸಲು ಎದ್ದು ನಿಲ್ಲಬೇಕು. ಒಬ್ಬರನ್ನೊಬ್ಬರು ಜೀವನ ಪರ್ಯಂತ ಭರಿಸುತ್ತೇವೆಂಬ ನಂಬಿಕೆ ಹುಟ್ಟಿದರೆ ಸಾಲದು. ಭರಿಸಲೇಬೇಕೆಂಬ ತೀರ್ಮಾನ ಮಾಡಿಕೊಂಡರೂ ಸಾಲದು. ಪ್ರೀತಿಯೆಂದರೆ ಒಬ್ಬರನ್ನೊಬ್ಬರು ಕೇವಲ ಭರಿಸುವಂತಹುದಲ್ಲ. ಕೂಡಿ ನಡೆಯುವಂತಹುದೂ ಅಲ್ಲ. ಕೈ ಹಿಡಿದು ನಡೆಸುವಂತಹುದೂ ಅಲ್ಲ. ಪ್ರೀತಿ ತಬ್ಬುಗೆಯಲ್ಲ. ಪ್ರೀತಿ ಉನ್ಮಾದವಲ್ಲ. ಪ್ರೀತಿ ನಿಟ್ಟುಸಿರೂ ಅಲ್ಲ. ಹಿಮವಂತನ ಪಾಲಿಗೆ ಪ್ರೀತಿಯೆಂಬುದು ಸದ್ದಿಲ್ಲದೆ ಸಂಭವಿಸುವ ಸಂಗತಿ"" ಪ್ರೀತಿಯ ಪತ್ರ ಒಲವಿನ ಪ್ರಾರ್ಥನಾ, ದೇವರು ರಾಕ್ಷಸನಾಗುವುದು ಇಂಥ ನಿರ್ನಿದ್ರೆಯ ರಾತ್ರಿಗಳಲ್ಲೇನೇನೋ? ಆದರೆ ರಾಕ್ಷಸನಾಗುವುದನ್ನು ನಿಗ್ರಹಿಸಿಕೊಳ್ಳುವಷ್ಟು ವ್ಯವಧಾನ ಮತ್ತು ಸಂಯಮ ನಮ್ಮಿಬ್ಬರಲ್ಲೂ ಇತ್ತು. Let's be thankful. ಸ್ಪರ್ಶವೆಂಬುದು ಇವತ್ತಿನ ಮಟ್ಟಿಗೆ ಅಧುಪಾತದ ಮೊದಲ ಮೆಟ್ಟಿಲು ನನಗೆ ನೀನು ಬೇಕು ಪ್ರಾರ್ಥನಾ. ನೀನೆಂದರೆ ದೇಹವಲ್ಲ. ನೀನೆಂದರೆ ಸ್ಪರ್ಶವಲ್ಲ. ನೀನೆಂದರೆ love you ಅಲ್ಲ. ನೀನೆಂದರೆ, ಇದೆಲ್ಲವುದರ ಒಟ್ಟು ಮೊತ್ತ. ನಂಗೆ ಕೇವಲ ಪ್ರಾರ್ಥನಾ ಅಲ್ಪ ಡಾಕ್ಟರ್ ಪ್ರಾರ್ಥನಾ ಬೇಕು. ಅಲ್ಲಿಯ ತನಕ ನಾನು ಕಾಯುತ್ತೇನೆ. ನಮ್ಮ ಪಾಪು ಕಾಯುತ್ತದೆ. ಪಾಪುವಿನ ಹೆಸರು ಹಿಮಾಂಶು! ನಿನ್ನ ಪತ್ರಕ್ಕೆ ಇಷ್ಟು ಉತ್ತರ ಸಾಕೆಂದು ಭಾವಿಸುತ್ತೇನೆ."
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ನಿಜಕ್ಕೂ ಅಂತರಾತ್ಮದಿಂದ ಈ ಪುಸ್ತಕವನ್ನು ಓದಲು ಯಾರಿಗೂ ಶಿಫಾರಸ್ಸು ಮಾಡಲು ಬಯಸುವುದಿಲ್ಲ,ಕಾರಣ ಇಷ್ಟೆ, ಈ ಪ್ರಪಂಚದಲ್ಲಿ ಒಳ್ಳೇದು-ಕೆಟ್ಟದು ಅಂತ ಎರಡು ಬಂದಾಗ ಕೆಟ್ಟದ್ದು ಬಹಳ ಬೇಗ ಹರಡುತ್ತದೆ. ಅದರಲ್ಲೂ ಪ್ರಾರ್ಥನಾ, ದೇಬು ಅಂಥವ ರನ್ನು ಪರಿಚಯಿಸಿ ಮನಸುಗಳ ಮಲಿನ ಮಾಡುವ ಪಾಪ ಮಾಡುವ ಬಯಕೆ ನನಗಿಲ್ಲ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.