ಪುಸ್ತಕದ ಶೀರ್ಷಿಕೆ: ಓ ಮನಸೇ..
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವೀಣಾ ಸುಬ್ರಹ್ಮಣ್ಯ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಓ ಮನಸೇ..ಇದು ಬಿಡಿ ಬರಹಗಳ ಸಂಗ್ರಹ. ಅಬಾಲವೃದ್ಧರಾದಿಯಾಗಿ ಸ್ತ್ರೀ, ಪುರುಷ ಎಂಬ ಭೇದ -ಭಾವವಿಲ್ಲದೆ ಸಮಸ್ತ ಓದುಗರಿಗೆ, ನೊಂದ ಮನಸ್ಸುಗಳಿಗೆ ದಾರಿ- ದೀಪವಾಗುವ ಸಾಂತ್ವನ ನೀಡುವ, ಅನೇಕ ಸ್ವಭಾವ, ವ್ಯಕ್ತಿತ್ವಗಳ ಹೂರಣ. ಬಾಳಿಗೆ ನಿಕಟವಾದ ಬರಹ, ಭಾವನೆಗಳ ಮಹಾಯಾನ. ಒಂದು ಕುಟುಂಬ ವ್ಯವಸ್ಥೆಯಲ್ಲಿ ಹೆಂಡತಿಯಾದವಳು ಗೃಹಕೃತ್ಯಗಳಿಂದ ಅದೆಷ್ಟು ಹೈರಾಣಾಗುತ್ತಾಳೆ. ಆದರೆ, ಅದೇ ಗಂಡನಾದವನು ತನ್ನನ್ನು ಕಛೇರಿ ಕೆಲಸಕ್ಕೆ ಮಾತ್ರ ಸೀಮಿತವಾಗಿಸಿ ಆರಾಮಾಗಿ ಕಾಫಿ ಸಿಪ್ ಮಾಡುತ್ತಾ, ಪೇಪರ್ ಓದುತ್ತಾ ಕಾಲಕಳೆಯುತ್ತಾನೆ. ಇತ್ತ, ಹೆಂಡತಿ ದಿನದ 24 ಗಂಟೆಯೂ ತನ್ನ ಗಂಡ,ಮಕ್ಕಳ ಬೇಕು - ಬೇಡಗಳನ್ನು ಪೂರೈಸಿ ನಂತರ ಮನೆವಾರ್ತೆಗಳನ್ನು [ಅಡುಗೆ ಕೆಲಸ, ಪಾತ್ರ - ಪಗಡೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು, ಮನೆಯ ಸ್ವಚ್ಛತೆ) ಬಿಡುವಿಲ್ಲದಂತೆ ಮುಗಿಸಿ ಕೊನೆಗೆ ತನ್ನ ಬೇಕು ಬೇಡಗಳ ಬಗ್ಗೆ ಗಮನ ಹರಿಸಲು ಹೇಗೆ ವಿಫಲಗೊಳ್ಳುತ್ತಾಳೆ ಎಂಬುದನ್ನು ಲೇಖಕರು ಸ್ವತಃ ಗಂಡಾಗಿ ಓರ್ವ ಹೆಣ್ಣಿನ ಮನಸ್ಸಿನ ಒಳ-ಬೇಗುದಿಗಳನ್ನು ತವಕ-ತಲ್ಲಣಗಳನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಇದು ಮೆಚ್ಚತಕ್ಕ ವಿಷಯ. ಅಲ್ಲದೆ, ಕೌಟುಂಬಿಕ ಬದುಕಿನ ಸಾಮರಸ್ಯಕ್ಕೆ ಹೊಂದಾಣಿಕೆ ಎಂಬುದು ಎಷ್ಟು ಅಗತ್ಯ ಅದು ಕೇವಲ ಮಹಿಳೆಗೆ ಮಾತ್ರ ಸೀಮಿತವೆ ? ಎಂಬುದನ್ನು ಪ್ರಶ್ನಿಸುವುದರ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ್ದಾರೆ. ಆತ್ಮಗೌರವವುಳ್ಳ ಮಹಿಳೆ ಕುಟುಂಬ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದರೆ ಮಡಿವಂತ ಸಮಾಜದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ನಡೆಯುವ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಪ್ರಸ್ತಾವನೆ ಇದರಲ್ಲಿದೆ. ಓದುತ್ತಾ ಹೋದಂತೆ ಪುಸ್ತಕದೊಳಗೆ ಏನಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಆತ್ಮವಿಶ್ವಾಸದ ಕೊರತೆಯುಳ್ಳವರಿಗೆ , ನಂಗೇ ಯಾಕೆ ಹೀಗಾಗುತ್ತೆ ಅಂತ ಕೊರಗುವವರಿಗೆ, ಸೋಲಿಗೆ ಕಾರಣ, ಚಿಂತ್ರೆ ಕನಸು ಹೀಗೆ ಎಲ್ಲ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಮಾಜದ ಓರೆಕೋರೆ ಮನಸ್ಥಿತಿಗಳನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ. ಈ ಪುಸ್ತಕವು ಪ್ರೀತಿಸುವ ಯುವ ಮನಸ್ಸುಗಳಿಗೆ ದಾರಿ- ದಿ ಹವಾಗಿದೆ. ಜೀವನದಲ್ಲಿ ನೊಂದವರಿಗೆ, ಸೋತು ಸುಣ್ಣವಾದವರಿಗೆ ಭರವಸೆಯ ಕಿಂಡಿಯಾಗಿದೆ. ಮಧ್ಯ ವಯಸ್ಕರಿಗೆ, ಬಾಳಿನ ಮುಸ್ಸಂಜೆಯಲ್ಲಿರುವವರಿಗೆ ಸಂಜೀವಿನಿಯಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಓ ಮನಸೇ ಪುಸ್ತಕವು ಗಾಯಕ್ಕೆ ಮುಲಾಮು ಸವರಿದರೆ ಹೇಗೆ ಗಾಯ ವಾಸಿಯಾಗುತ್ತದೋ ಅದೇ ರೀತಿ ಈ ಪುಸ್ತಕವನ್ನು ಓದಿದವರ ಮನಸ್ಸಿನ ಗಾಯ ವಾಸಿಯಾಗಿ ಜೀವನದಲ್ಲಿ ಹೊಸ ಹುರುಪು, ಉತ್ಸಾಹ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನಡುವಯಸ್ಸೆಂಬ ಹೊಸ್ತಿಲಲಿ ನಿಂತು .. ಈ ಬರಹ.. ನಲವತ್ತು ಯೌವನದ ಮುದಿತನ ಐವತ್ತು ಮುದಿತನದ ಯೌವನ. ವಯಸ್ಸು ವರುಷಗಳಿಂದ ಅಳೆಯುವಂಥಾದ್ದಲ್ಲ. ಉತ್ಸಾಹ ಮತ್ತು ಆರೋಗ್ಯದಿಂದ ಅಳೆಯಬೇಕಾದದ್ದು ಯೌವನ ಕೊಟ್ಟ ಅನುಭವ,ಬಾಲ್ಯಕೊಟ್ಟ ಉತ್ಸಾಹ ನಡುವಯಸ್ಸನ್ನು ಬೆಳಗುತ್ತದೆ ಎಂದಿದ್ದಾರೆ. ಮುಖ್ಯವಾಗಿ, ಡೇಟ್ ಆಫ್ ಬರ್ತ್ ಎಂಬ ದುಷ್ಟನನ್ನು ಸಾಯಿಸಿ ಅನ್ನೋ ಮಾತು ಯಾವತ್ತೂ ನಮ್ಮ ಸ್ಮರಣಿಯಲ್ಲಿ ಇರಬೇಕಾದದ್ದು. ಪಾತ್ರಗಳು - ಕುಟುಂಬ ವ್ಯವಸ್ಥೆಯಲ್ಲಿ ಗಂಡ ಹೆಂಡತಿ ಮಕ್ಕಳ ಪಾತ್ರಗಳು
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಯಾರಿಗಾಗಿ ಈ ಪುಸ್ತಕ : ಪ್ರೀತಿಸುವ ಯುವ ಮನಸ್ಸುಗಳಿಗೆ .
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.